ಮದುವೆ ದಿನ ಕೈಕೊಟ್ಟ ವರ: ವಧುವಿಗೆ ಬಾಳು ಕೊಟ್ಟ ಕಂಡಕ್ಟರ್

ಚಿಕ್ಕಮಗಳೂರು| Krishnaveni K| Last Modified ಸೋಮವಾರ, 4 ಜನವರಿ 2021 (10:13 IST)
ಚಿಕ್ಕಮಗಳೂರು: ಮದುವೆ ದಿನವೇ ವರ ಛತ್ರದಿಂದ ನಾಪತ್ತೆಯಾಗಿ ವಧುವಿನ ಮನೆಯವರು ದಿಕ್ಕೇ ತೋಚದೇ ಕುಳಿತಿದ್ದಾಗ ಯುವಕನೊಬ್ಬ ಬಾಳು ಕೊಟ್ಟ ಘಟನೆ ತರೀಕೆರೆ ತಾಲೂಕಿನಲ್ಲಿ ನಡೆದಿದೆ.
 

ಹಿಂದಿನ ದಿನ ರಿಸೆಪ್ಷನ್ ನಲ್ಲಿ ಭಾಗಿಯಾಗಿದ್ದ ವರ ಮರುದಿನ ಮದುವೆ ದಿನವೇ ನಾಪತ್ತೆಯಾಗಿದ್ದಾನೆ. ಇದರಿಂದ ವಧುವಿನ ಮನೆಯವರು ಕಂಗಾಲಾಗಿದ್ದರು. ಮೂಲಗಳ ಪ್ರಕಾರ ವರನ ಮಾಜಿ ಪ್ರೇಯಸಿ ಮದುವೆ ಮನೆಗೆ ಬಂದು ವಿಷ ಕುಡಿದು ಆತ್ಮಹತ್ಯೆ ಮಾಡುವ ಬೆದರಿಕೆ ಹಾಕಿದ್ದಕ್ಕೆ ಬೆದರಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಆದರೆ ದಿಕ್ಕೆಟ್ಟ ವಧುವಿಗೆ ಬಾಳು ಕೊಡಲು ಮುಂದಾಗಿದ್ದು ಪಕ್ಕದ ಗ್ರಾಮದ ಬಿಎಂಟಿಸಿ ಬಸ್ ಕಂಡಕ್ಟರ್. ಇದರೊಂದಿಗೆ ಮದುವೆ ಸಾಂಗವಾಗಿ ನೆರವೇರಿದೆ.
ಇದರಲ್ಲಿ ಇನ್ನಷ್ಟು ಓದಿ :