ಮುಳಬಾಗಿಲು: ಈ ಕಾಲದಲ್ಲಿ ಒಂದು ಹೆಣ್ಣು ಸಿಗುವುದೇ ಕಷ್ಟ. ಅಂತಹದ್ದರಲ್ಲಿ ಇಲ್ಲೊಬ್ಬ ವರ ಅಕ್ಕನ ಜೊತೆ ತಂಗಿಯನ್ನೂ ಮದುವೆಯಾಗಿದ್ದಾನೆ. ಅದೂ ಒಂದೇ ಮಂಟಪದಲ್ಲಿ! ಇದು ನಡೆದಿರುವುದು ಮುಳಬಾಗಿಲು ತಾಲೂಕು ತಿಮ್ಮರಾವುತನಹಳ್ಳಿಯಲ್ಲಿ. ಮೇ 7 ರಂದು ಈ ವಿಶಿಷ್ಟ ಜೋಡಿಯ ವಿವಾಹ ಕಾರ್ಯಕ್ರಮ ನೆರವೇರಿತ್ತು. ಈ ವಿಶೇಷ ಮದುವೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ವರ ಉಮಾಪತಿ ವಧುವಿನ ಕುಟುಂಬದ ಸಂಬಂಧಿಕನೇ. ಈತ ತಂಗಿಯನ್ನು ಮೆಚ್ಚಿಕೊಂಡಿದ್ದ. ಆದರೆ ತಂಗಿ ಮಾತು