ಮನೆ ಮಂದಿ ಸೇರಿ ನಿಶ್ಚಯ ಮಾಡಿದ್ದ ವಧುವಿಗೆ ವರನೊಬ್ಬ ಕೈಕೊಟ್ಟ ಘಟನೆ ನಡೆದಿದೆ. ವಧು ಸಿಂಚನಾ ಜೊತೆಗೆ ವರನಾದ ಉಮೇಶ್ ನ ಮದುವೆ ನಡೆಯಬೇಕಿತ್ತು. ಆದರೆ ಮದುವೆಗೂ ಮೊದಲೇ ತಾನು ಪ್ರೀತಿಸುತ್ತಿದ್ದ ಯುವತಿಗೆ ವರ ಉಮೇಶ್ ತಾಳಿ ಕಟ್ಟಿದ್ದಾನೆ. ವರ ಉಮೇಶ್ ನ ನಡೆಯಿಂದ ಕಕ್ಕಾಬಿಕ್ಕಿಯಾದ ವಧುವಿನ ಕಡೆಯವರು ನ್ಯಾಯಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅಂದ್ಹಾಗೆ ಮೈಸೂರಿನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.