ಭಾರತೀಯ ಮದುವೆಗಳು ಒಂದು ರೀತಿಯ ಹಬ್ಬದಂತಿದ್ದು, ಇಡೀ ಮದುವೆ ಮನೆ ಒಂದು ವಾರದ ಮಟ್ಟಿಗೆ ಸಂತೋಷ ಮತ್ತು ಉತ್ಸಾಹದಿಂದ ತುಂಬಿರುತ್ತದೆ. ಅದರಲ್ಲೂ ಮೆಹಂದಿ ಕಾರ್ಯಕ್ರಮ ಮತ್ತು ಇನ್ನಿತರೆ ಮದುವೆ ಪೂರ್ವ ಕಾರ್ಯಕ್ರಮಗಳು, ಮದುವೆ ಮನೆಯಲ್ಲಿ ಡ್ಯಾನ್ಸ್ ಮತ್ತು ಸಂಗೀತವಂತೂ ಇದ್ದೇ ಇರುತ್ತದೆ. ಇವೆರಡೂ ಇಲ್ಲದೆ ಮದುವೆ ಕಾರ್ಯಕ್ರಮಗಳು ಅಪೂರ್ಣ ಅಂತಾನೆ ಹೇಳಬಹುದು. ಇನ್ನು ಸಂಗೀತ್ ಕಾರ್ಯಕ್ರಮವಂತೂ ಕೇಳೋದೆ ಬೇಡ, ಆ ರೀತಿಯಲ್ಲಿ ಜೋಶ್ ಇರುತ್ತದೆ. ಈ ಮದುವೆಯ ಎಲ್ಲಾ ಕಾರ್ಯಕ್ರಮಗಳಲ್ಲಿ