ಅವರಿಬ್ಬರ ಮದುವೆಗೆ ಕೊರೊನಾ ಅಡ್ಡಿಯಾಗಿತ್ತು. ಆದರೂ ಛಲಬಿಡದ ಯುವಕ ಸೈಕಲ್ ಮೇಲೇರಿ ಸಾಗಿ ತನ್ನ ಮನದನ್ನೆಯನ್ನು ಮದುವೆಯಾಗಿ ಮನೆಗೆ ಕರೆತಂದಿದ್ದಾನೆ. ಕಲ್ಕು ಪ್ರಜಾಪತಿ ಹಾಗೂ ರಿಂಕಿ ಮದುವೆ ನಿಶ್ಚಯವಾಗಿತ್ತು. ಮದುವೆ ಕಾರ್ಡ್ ಗಳೂ ಸಿದ್ಧಗೊಂಡಿದ್ದವು. ಏಪ್ರಿಲ್ 25 ರಂದು ಮದುವೆ ನೆರವೇರಬೇಕಿತ್ತು. ಆದರೆ ಲಾಕ್ ಡೌನ್ ನಿಂದ ಇವರ ಮದುವೆಗೆ ಅನುಮತಿ ಸಿಗಲಿಲ್ಲ. ಆದರೇನಂತೆ ಬೈಕ್ ಬಿಟ್ಟು ನೇರವಾಗಿ ಸೈಕಲ್ ತುಳಿಯುತ್ತಾ ನೂರಾರು ಕಿಲೋ ಮೀಟರ್ ಸಾಗಿ ವಧು ರಿಂಕಿ