ಬೆಂಗಳೂರು: ಗಜರಾತ್ ರಾಜ್ಯಸಭೆ ಚುನಾವಣೆಗೆ ಆಪರೇಷನ್ ಕಮಲ ಭೀತಿಗೆ ಸಿಲುಕಿ ಬೆಂಗಳೂರಿಗೆ ಬಂದು ಈಗಲ್ ಟನ್ ರೆಸಾರ್ಟ್ ನಲ್ಲಿ ಬೀಡುಬಿಟ್ಟಿದ್ದ ಗುಜರಾತ್ ಶಾಸಕರು ಮರಳಿ ತವರಿಗೆ ತೆರಳಲಿದ್ದಾರೆ. ಇಂದು ಬೆಳಿಗ್ಗೆ ಮೂವರು ಶಾಸಕರು ಗುಜರಾತ್ ನತ್ತ ಪ್ರಯಾಣ ಬೆಳೆಸಿದ್ದಾರೆ. ಉಳಿದ ಶಾಸಕರೂ ತವರಿಗೆ ಮರಳಲು ಹಠ ಹಿಡಿಯುತ್ತಿರುವಾಗಿ ತಿಳಿದುಬಂದಿದೆ.ಐಟಿ ಅಧಿಕಾರಿಗಳು ಈಗಲ್ ಟನ್ ರೆಸಾರ್ಟ್ ನಲ್ಲೂ ಬೀಡುಬಿಟ್ಟಿರುವುದರಿಂದ ಬೆದರಿದ ಶಾಸಕರು ರೆಸಾರ್ಟ್ ರಾಜಕಾರಣ ಬಿಟ್ಟು ತವರಿಗೆ ಮರಳಲು ಪಟ್ಟುಹಿಡಿದಿದ್ದಾರೆ