ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳುತ್ತಿರುವ ಹಿರಿಯ ನಾಯಕರ ಪೈಕಿಗೆ ಎಚ್. ವಿಶ್ವನಾಥ್ ಸೇರ್ಪಡೆಯಾಗಿದ್ದಾರೆ. ಇಂದು ಅಧಿಕೃತವಾಗಿ ರಾಜೀನಾಮೆ ನೀಡಿದ ವಿಶ್ವನಾಥ್, ಕಾವ್ಯಾತ್ಮಕವಾಗಿ ರಾಜೀನಾಮೆ ಪತ್ರ ಓದಿದರು. ಮೂಲತಃ ಸಾಹಿತಿಯೂ ಆಗಿರುವ ವಿಶ್ವನಾಥ್ ರಾಜೀನಾಮೆ ನೀಡಲು ಕಾರಣವನ್ನು ಆಸಕ್ತಿಕರವಾಗಿ ವಿವರಿಸಿದ್ದಾರೆ. ಇದೇ ಸಂದರ್ಭದಲ್ಲಿ ಸ್ವ ಹಿತಾಸಕ್ತಿ ದೃಷ್ಟಿಯಿಂದ ಕಾಂಗ್ರೆಸ್ ಗೆ ರಾಜೀನಾಮೆ ನೀಡುತ್ತಿಲ್ಲ.ಯಾವ ತತ್ವದ ಆಧಾರದಲ್ಲಿ ಕಾಂಗ್ರೆಸ್ ಸ್ಥಾಪನೆಯಾಯಿತೋ, ಅದರ ಆಶಯಕ್ಕೆ ತಕ್ಕಂತೆ ಅಲ್ಲಿ ಯಾವುದೂ ನಡೆಯುತ್ತಿಲ್ಲ