ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂಸತ್ತು ಕಲಾಪ ನಡೆಯುತ್ತಿರಬೇಕಾದರೆ ಮೊಬೈಲ್ ನಲ್ಲಿ ಗೇಮ್ಸ್ ಆಡುತ್ತಿರುತ್ತಾರಂತೆ. ಅವರೊಂಥರಾ ಪಾಪ ಪಾಂಡು ಇದ್ದಂತೆ ಎಂದು ಹೇಳಿದವರು ಕಾಂಗ್ರೆಸ್ ನಲ್ಲೇ ಇದ್ದ ಹಿರಿಯ ರಾಜಕಾರಣಿ, ಇದೀಗ ಜೆಡಿಎಸ್ ಸೇರಿಕೊಂಡಿರುವ ಎಚ್ ವಿಶ್ವನಾಥ್.ರಾಹುಲ್ ಗಾಂಧಿ ಬಗ್ಗೆ ಟೀಕೆ ಮಾಡುತ್ತಲೇ ಈ ವಿಚಾರ ಹೊರ ಹಾಕಿದ ವಿಶ್ವನಾಥ್, ನಾನು ಕಾಂಗ್ರೆಸ್ ಸಂಸದನಾಗಿದ್ದರಿಂದ ರಾಹುಲ್ ಗಾಂಧಿಯವರನ್ನು ಹತ್ತಿರದಿಂದ ಬಲ್ಲೆ. ಹಾಗಾಗಿಯೇ ಈ ಸತ್ಯ ಹೇಳುತ್ತಿದ್ದೇನೆ. ಅವರೊಬ್ಬ ಗಂಭೀರ