ಹಿಜಾಬ್ನಿಂದ ಆರಂಭವಾದ ಗಲಾಟೆ ಹಲಾಲ್ವರೆಗೆ ಬಂದು ನಿಂತಿದೆ. ಸದ್ಯ ರಾಜ್ಯದಲ್ಲಿ ಹಲಾಲ್ ಮಾಂಸ ಖರೀದಿ ಮಾಡದಂತೆ ಬಾಯ್ಕಾಟ್ ಹಲಾಲ್ ಅಭಿಯಾನ ಆರಂಭವಾಗಿದೆ. ಮುಸ್ಲಿಂ ಧರ್ಮದ ಆಹಾರ ಕ್ರಮಕ್ಕೆ ಹಲಾಲ್ ಎಂದು ಹೇಳಲಾಗುತ್ತದೆ. ಬಲಿ ಕೊಡುವ ಪ್ರಾಣಿಯ ರಕ್ತ ನಾಳವನ್ನು ಕುಯ್ಯಲಾಗುತ್ತದೆ. ಇದರಿಂದ ರಕ್ತ ಪೂರ್ತಿ ಹೊರಬರುತ್ತದೆ. ಈ ಮೂಲಕ ರಕ್ತದಲ್ಲಿರುವ ಬ್ಯಾಕ್ಟೀರಿಯಾಗಳು ಹೊರಗೆ ಬರುತ್ತವೆ. ನಂತರ ಶುದ್ಧ ಮಾಂಸ ಸಿಗುತ್ತದೆ. ಇನ್ನು ಮೆಕ್ಕಾ ಕಡೆ ಮುಖ ಮಾಡಿ ಪ್ರಾಣಿಗಳನ್ನ ಕುಯ್ಯುತ್ತಾರೆ.