ನವದೆಹಲಿ(ಜು.24): ಆಪರೇಷನ್ ಕೊಠಡಿಯಲ್ಲಿದ್ದ 24 ವರ್ಷದ ಯುವತಿ ಸತತ ಹನುಮಾನ್ ಚಾಲೀಸ್ ಜಪಿಸುತ್ತಿದ್ದಳು. ಆಕೆಗೆ ಅತ್ಯಂತ ಕಠಿಣವಾದ ಪರೀಕ್ಷೆ ಅದಾಗಿತ್ತು. ಸಾವು ಬದುಕಿನ ಆಯ್ಕೆಗಳಷ್ಟೇ ಇದ್ದವು. ಬಾಳಿ ಬದುಕಬೇಕಾದ ಯುವತಿಗೆ ಸಣ್ಣ ವಯಸ್ಸಿನಲ್ಲೇ ಬ್ರೈನ್ ಟ್ಯೂಮರ್ ಆಗಿ ಚಿಕಿತ್ಸೆಗೆ ಒಳಗಾಗಿದ್ದಳು. ಅಂದು ಆಕೆಯ ಮೆದುಳಿನ ಆಪರೇಷನ್ ಸಮಯ. ವೈದ್ಯರು, ತಜ್ಞರು ಕ್ಲಿಷ್ಟಕರವಾದ ಒಂದು ಆಪರೇಷನ್ ನಡೆಸುತ್ತಿದ್ದರೆ ಯುವತಿ ಹನುಮಾನ್ ಚಾಲೀಸ್ ಜಪಿಸುತ್ತಿದ್ದಳು. ಏಮ್ಸ್ನ ವೈದ್ಯರು ಆಕೆಯಲ್ಲಿದ್ದ ಬ್ರೈನ್ ಟ್ಯೂಮರ್ ಯಶಸ್ವಿಯಾಗಿ