ರಾಜ್ಯ ಸರಕಾರ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡೋಕೆ ಸಿದ್ಧತೆ ನಡೆಸಿರೋ ಬೆನ್ನಲ್ಲೇ ಜಮಖಂಡಿ ಜಿಲ್ಲೆಯಾಗಬೇಕೆಂದು ಆಗ್ರಹ ಬಲವಾಗಿ ಕೇಳಿಬರುತ್ತಿದೆ.ಬಾಗಲಕೋಟೆ ಜಿಲ್ಲೆಯ ಜಮಖಂಡಿಯನ್ನು ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು. ಹೀಗಂತ ಆಗ್ರಹಿಸಿ ಪ್ರತಿಭಟನಾ ರ್ಯಾಲಿ ನಡೆಯಿತು. ಆದರೆ ಪ್ರತಿಭಟನೆಯಿಂದ ದೂರ ಉಳಿದಿದ್ದಾರೆ ಜನಪ್ರತಿನಿಧಿಗಳು.ಶಾಲಾ - ಕಾಲೇಜು ವಿದ್ಯಾರ್ಥಿಗಳು, ಸಂಘ, ಸಂಸ್ಥೆಗಳು, ಪಾದಯಾತ್ರೆಯಲ್ಲಿ ಭಾಗಿಯಾಗಿದ್ರು.ಜಮಖಂಡಿ ಓಲೇಮಠದ ಚನ್ನಬಸವ ಶ್ರೀಗಳು ನೇತೃತ್ವ ವಹಿಸಿದ್ರು. ಚನ್ನಬಸವ ಶ್ರೀಗಳಿಗೆ 15 ಕ್ಕೂ ಹೆಚ್ಚು ಮಠಾಧೀಶರು ಸಾಥ್ ನೀಡಿದ್ರು.ಜಮಖಂಡಿ