ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮತ್ತೆ ಅಧಿಕಾರದ ಗದ್ದುಗೆ ಏರಲಿ ಎಂದು ಇಂದು ಗವಿಗಂಗಾಧರ ದೇಗುಲದಲ್ಲಿಹೋಮ ಹವನಗಳನ್ನು ಮಾಡಲಾಗಿದೆ. ಬೆಳಿಗ್ಗೆ 8.30 ಗಂಟೆ ವೇಳೆಗೆ ದೇಗುಲಕ್ಕೆ ಕುಟುಂಬದ ಜೊತೆ ಆಗಮಿಸಿದ ಯಡಿಯೂರಪ್ಪ ಯಾಗದಲ್ಲಿ ಭಾಗಿಯಾಗಿದ್ದಾರೆ. ಗ್ರಹಣ ದೋಷ ಮುಕ್ತಿ ಹಾಗೂ ಅಧಿಕಾರ ಸಿದ್ಧಿಗಾಗಿ ಮೂರು ಗಂಟೆಗಳ ಕಾಲ ಯಡಿಯೂರಪ್ಪ ಮಹಾರುದ್ರಯಾಗ ಮಾಡಿಸಿದ್ದಾರೆ. ನಾಳೆ ವಿಶ್ವಾಸ ಮತ ಯಾಚನೆಯ ವೇಳೆ ತಮಗೆ ಗೆಲುವು ಸಿಗಲೆಂದು ದೇವರಲ್ಲಿ ಬೇಡಿಕೊಂಡಿದ್ದಾರೆ