ಲೋಕಸಭಾ ಚುನಾವಣಾ ದಿನಾಂಕ ಪ್ರಕಟ ಹಿನ್ನಲೆಯಲ್ಲಿ ಹಾಸನದಲ್ಲಿ ಗರಿಗೆದರಿದ ರಾಜಕೀಯ ಬೆಳವಣಿಗೆ ಕುತೂಹಲ ಮೂಡಿಸಿದೆ.ಲೋಕಸಮರದ ಅಭ್ಯರ್ಥಿಗಳ ಬಗ್ಗೆ ನಡೆತಿದೆ ಭಾರೀ ಲೆಕ್ಕಾಚಾರ. ಮೊಮ್ಮಗನಿಗಾಗಿ ಕ್ಷೇತ್ರವನ್ನ ತ್ಯಾಗ ಮಾಡಲು ಮುಂದಾದ ದೇವೇಗೌಡರ ನಡೆಯತ್ತ ಚಿತ್ತ ಹರಿಯುವಂತಾಗಿದೆ. 6 ಬಾರಿ ಪ್ರತಿನಿಧಿಸಿದ್ದ ಹಾಸನವನ್ನು ಪ್ರಜ್ವಲ್ ಹೆಗಲಿಗಿಟ್ಟ ದೇವೇಗೌಡರು ರಾಜಕೀಯಕ್ಕೆ ಕುಟುಂಬದ ಮತ್ತೊಂದು ದಾಳವನ್ನು ಉರುಳಿಸಿದ್ದಾರೆ.ಜೆಡಿಎಸ್ ಜೊತೆಗಿನ ಒಪ್ಪಂದಕ್ಕೆ ಕಾಂಗ್ರೆಸ್ ಭಾರೀ ವಿರೋಧ ವ್ಯಕ್ತಪಡಿಸುತ್ತಿದೆ. ಹಾಸನದಿಂದ ಪ್ರಜ್ವಲ್ ಮೈತ್ರಿ ಅಭ್ಯರ್ಥಿ ಎಂಬುದು ಬಹುತೇಕ ಖಚಿತವಾದಂತಿದೆ