ಮಂಗಳೂರು : ಧರ್ಮದ ವಿಚಾರದಲ್ಲಿ ದ್ವೇಷ, ನೋವುಂಟು ಮಾಡಬಾರದು. ಪ್ರೀತಿ ಸಹೋದರತೆಯನ್ನು ಬೆಳೆಸಬೇಕು ಎಂದು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ. ಧರ್ಮಗಳ ಬಗ್ಗೆ ಅವಹೇಳನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲಾ ಧರ್ಮಕ್ಕೂ ಅದರದ್ದೇ ಆದ ಮಹತ್ವವಿದೆ, ಗೌರವವಿದೆ. ಎಲ್ಲಾ ಧರ್ಮವೂ ಪ್ರೀತಿ, ವಿಶ್ವಾಸ, ಸಹೋದರತೆಯನ್ನು ತಿಳಿಸುತ್ತದೆ.ಇದನ್ನು ಹೊರತುಪಡಿಸಿ ದ್ವೇಷವನ್ನು ಎಲ್ಲಿಯೂ ತಿಳಿಸುವುದಿಲ್ಲ. ಎಲ್ಲಾ ಧರ್ಮಗಳು ಸಮಾಜವನ್ನು ಒಗ್ಗಟ್ಟು ಮಾಡುವ ಸಂದೇಶ ಕೊಡುತ್ತೆ. ಬಿಕ್ಕಟ್ಟು ಮಾಡುವ ಸಂದೇಶ ಯಾವ ಧರ್ಮವೂ