ರಾಜ್ಯದಲ್ಲಿ ನೆರೆ ಪರಿಸ್ಥಿತಿಯಿಂದ ಸಹಸ್ರಾರು ಜನರ ಬದುಕು ಬೀದಿಗೆ ಬಿದ್ದಿದೆ. ಈ ನಡುವೆ ಸರಕಾರ ಪರಿಹಾರ ಚೆಕ್ ವಿತರಣೆ ಮಾಡುತ್ತಿದ್ದರೂ ಅದರಲ್ಲಿಯೂ ಭ್ರಷ್ಟಾಚಾರ ನುಸುಳುತ್ತಿದೆ ಎಂದು ಜನರು ದೂರಿದ್ದಾರೆ. ಕುಂದಾನಗರಿ ಖ್ಯಾತಿಯ ಬೆಳಗಾವಿ ಜಿಲ್ಲೆಯ ಜನರು ಪ್ರವಾಹದಿಂದಾಗಿ ಹಾನಿ ಅನುಭವಿಸಿದ್ದಾರೆ. ಈ ನಡುವೆ, ಕೆಲವು ಪುಡಾರಿಗಳು, ಅಧಿಕಾರಿಗಳು ಲಂಚ ಪಡೆದು ನೆರೆ ಪೀಡಿತರಿಗೆ ಪರಿಹಾರ ಚೆಕ್ ವಿತರಣೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳು ಹಾಗೂ ದಲ್ಲಾಳಿಗಳು ಸಂತ್ರಸ್ಥರಿಂದ ಹಣ