ಬೋರ್ ವೆಲ್ ಅಂದರೆ ಅದರಲ್ಲಿ ತಣ್ಣೀರು ಬರೋದು ಸಹಜ. ಆದರೆ ಅದೇ ಬೋರವೆಲ್ ನಲ್ಲಿ ಬಿಸಿನೀರು ಬಂದರೆ ಹೇಗಾಗಬೇಡಾ? ಇಂತಹ ಒಂದು ಕುತೂಹಲಕರ ಬೋರವೆಲ್ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಈ ಬೋರವೆಲ್ ನಲ್ಲಿ ಬಿಸಿನೀರು ಬರ್ತಿರೋದು ಆಶ್ಚರ್ಯಕ್ಕೆ ಕಾರಣವಾಗಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ಹತ್ತಿರದ ಚಂದಾಪುರದಲ್ಲಿ ಇಂತಹ ಬೋರವೆಲ್ ಕಂಡು ಬಂದಿದೆ. ಶಿವಕುಮಾರ ಎಂಬೋರ ಮನೆಯಲ್ಲಿ ಬೋರ್ ವೆಲ್ ಹೊಸದಾಗಿ ಕೊರೆಸಿದ್ದಾರೆ. ಅದರಲ್ಲಿ ನೀರು ಬಿಸಿಯಾಗಿ ಬರ್ತಿರೋದು ವಿಶೇಷ