ಅಪ್ರಾಪ್ತ ಮಗಳ ಮೇಲೆ ರೇಪ್ ಗೆ ಹೆತ್ತವರೇ ಮಾಡಿದ್ರಾ ಅಗ್ರಿಮೆಂಟ್?

ತುಮಕೂರು, ಗುರುವಾರ, 2 ಮೇ 2019 (17:35 IST)

10 ಲಕ್ಷ ಹಣಕ್ಕೆ ಹೆತ್ತ ಮಗಳನ್ನೇ ಮಾರಾಟ ಮಾಡಿದ್ದಾರಾ ತಂದೆ ತಾಯಿ...? ಎನ್ನುವ ಪ್ರಶ್ನೆ ಈಗ ಕಾಡತೊಡಗಿದೆ.
ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಹೆತ್ತವರೇ ಅಗ್ರಿಮೆಂಟ್ ಮೂಲಕ ಅನುಮತಿ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ತುಮಕೂರು‌ ಜಿಲ್ಲೆಯಲ್ಲಿ ನಡೆದಿದೆಯಾ? ನಾಗರೀಕ‌ ಸಮಾಜವೇ ತಲೆ ತಗ್ಗಿಸುವ ಘಟನೆ ? ಎಂಬುದು ಬಹಿರಂಗವಾಗಬೇಕಿದೆ.
ಕುರಿಹಳ್ಳಿ ಗ್ರಾಮದ ಬಸವಲಿಂಗಯ್ಯ, ಸುಶೀಲಮ್ಮ ದಂಪತಿಯ ಮೇಲೆ ಅಳಿಯ ರಾಜಶೇಖರ್ ಗಂಭೀರ ಆರೋಪ ಮಾಡಿದ್ದಾರೆ.
ಅಳಿಯ ರಾಜಶೇಖರ್ ಗೆ ಮಗಳು ಕಲ್ಪನಾ, ಮಗ ದಯಾನಂದ್ ಸಾಥ್‌ ನೀಡಿದ್ದಾರೆ. 15 ವರ್ಷದ ಬಾಲಕಿಯನ್ನ 40 ವರ್ಷದ ಗಿರೀಶ್ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಗಿರೀಶನಿಂದ ಹತ್ತು ಲಕ್ಷ ಪಡೆದು ಮದುವೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಗ್ರಿಮೆಂಟ್ ನಲ್ಲಿ ಬಾಲಕಿಯನ್ನ ಲೈಂಗಿಕವಾಗಿ ಬಳಸಿಕೊಳ್ಳಬಹುದು ಎಂದು ಉಲ್ಲೇಖ ಮಾಡಲಾಗಿದೆ.

ಮತ್ತೊಂದು ಅಗ್ರಿಮೆಂಟ್ ನಲ್ಲಿ ಬೇರೆ ಹುಡುಗರು ಲೈಂಗಿಕವಾಗಿ ಬಳಸಿಕೊಳ್ಳಬಹುದು ಎಂದು ಉಲ್ಲೇಖ ಮಾಡಲಾಗಿದೆ.
ಮೂರು ಅಗ್ರಿಮೆಂಟ್ ಪೇಪರ್ ಗಳನ್ನ ದಾಖಲೆಯಾಗಿ ಮುಂದಿಡುತ್ತಿದ್ದಾರೆ ಅಳಿಯ ರಾಜಶೇಖರ್.

10 ದಿನಗಳಿಂದ ಬಾಲಕಿ, ತಂದೆ ತಾಯಿ‌ ನಾಪತ್ತೆಯಾಗಿದ್ದಾರೆ. ಮನೆಗೆ ಬೀಗ ಜಡಿದು ನಾಪತ್ತೆಯಾಗಿರುವ ಬಸವಲಿಂಗಯ್ಯ, ಸುಶೀಲಮ್ಮ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಮತ್ತು ರಕ್ಷಣಾ ಇಲಾಖೆಗೆ ದೂರು ನೀಡಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಕಾಮುಕರು

ಭೋಪಾಲ್ : 12 ವರ್ಷದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಬಳಿಕ ಕಲ್ಲಿನಿಂದ ಆಕೆಯ ತಲೆಯನ್ನು ಜಜ್ಜಿ ...

news

ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿನಿಗೆ ಸಮಾಧಾನ ಮಾಡುವ ನೆಪದಲ್ಲಿ ಶಿಕ್ಷಕ ಹೇಳಿದ್ದೇನು ಗೊತ್ತಾ?

ಮಂಡ್ಯ : ಎಸ್‍.ಎಸ್‍.ಎಲ್‍.ಸಿ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿನಿಗೆ ಸಮಾಧಾನ ಹೇಳುವ ನೆಪದಲ್ಲಿ ...

news

ಸಿಬಿಎಸ್‌ಇ ಪಿಯುಸಿ ದ್ವಿತೀಯ ಫಲಿತಾಂಶ ಪ್ರಕಟ

ನವದೆಹಲಿ: ಸಿಬಿಎಸ್‌ಇ ಪಿಯುಸಿ ದ್ವಿತೀಯ ಫಲಿತಾಂಶ ಪ್ರಕಟವಾಗಿದ್ದು. ಸಿಬಿಎಸ್‌ಇ ಬೋರ್ಡ್‌‍ನ cbse.nic.in ...

news

ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಸಾಧ್ಯವಿಲ್ಲ: ಸುಬ್ರಹ್ಮಣ್ಯಂ ಸ್ವಾಮಿ

ನವದೆಹಲಿ: ವಿವಾದಾತ್ಮಕ ಹೇಳಿಕೆಗಳಿಂದ ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಸದಾ ಚರ್ಚೆಯಲ್ಲಿರುತ್ತಾರೆ. ...