ಬೆಂಗಳೂರು: ಮುಂಬೈಗೆ ಹೋಗಿ ಕೂತಿರುವ ಅತೃಪ್ತರನ್ನು ಹೇಗಾದರೂ ಮಾಡಿ ಕರೆತರಬೇಕೆಂದು ಜೆಡಿಎಸ್ ಮತ್ತು ಕಾಂಗ್ರೆಸ್ ಶತ ಪ್ರಯತ್ನ ಮುಂದುವರಿಸಿದೆ.ಸೋಮವಾರ ವಿಶ್ವಾಸಮತ ಯಾಚನೆ ವೇಳೆ ಸರ್ಕಾರಕ್ಕೆ ಸೋಲಾಗದಂತೆ ನೋಡಿಕೊಳ್ಳಲು ಅತೃಪ್ತ ಶಾಸಕರನ್ನು ಕರೆತರಲು ದೇವೇಗೌಡರ ನೇತೃತ್ವದಲ್ಲಿ ಪ್ರಯತ್ನ ನಡೆದಿದೆ. ಈ ಮೊದಲು ರಾಜೀನಾಮೆ ನೀಡಿ ನಂತರ ವಾಪಸ್ ಪಡೆದ ರಾಮಲಿಂಗಾರೆಡ್ಡಿ ಜತೆ ದೇವೇಗೌಡರು ತಮ್ಮ ನಿವಾಸದಲ್ಲಿ ಭಾರೀ ಚರ್ಚೆ ನಡೆಸಿದ್ದಾರೆ.ರಾಮಲಿಂಗಾ ರೆಡ್ಡಿ ಮೂಲಕ ಅತೃಪ್ತರನ್ನು ಕರೆತರಲು ಪ್ರಯತ್ನ ಮುಂದುವರಿದಿದೆ ಎನ್ನಲಾಗಿದೆ. ರಾಮಲಿಂಗಾ