ಬೆಂಗಳೂರು: ಕಾಂಗ್ರೆಸ್ ವಿರುದ್ಧ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದು ಗೆಲ್ಲಬೇಕೆಂದರೆ ಕೈ ನಾಯಕರು ಯಾವ ಮಟ್ಟಕ್ಕೆ ಬೇಕಾದರೂ ಇಳಿತಾರೆ ಎಂದಿದ್ದಾರೆ.ರಾಜ್ಯ ಕಾಂಗ್ರೆಸ್ ಸರ್ಕಾರ ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಮಾಡಿರುವುದರ ಬಗ್ಗೆ ಮಾತನಾಡಿದ ದೇವೇಗೌಡರು, ಇದರ ಪರಿಣಾಮ ಯಾವ ರೀತಿ ಇರುತ್ತದೆಂದು ಹೇಳುವುದು ಕಷ್ಟ. ಹಿಂದಿನ ಸರ್ಕಾರ ಈ ಬೇಡಿಕೆ ಒಪ್ಪಿರಲಿಲ್ಲ. ಆದರೆ ಈ ಸರ್ಕಾರ ಚುನಾವಣೆ ಹತ್ತಿರವಿದೆ ಎನ್ನುವಾಗ ಇದಕ್ಕೆ ಒಪ್ಪಿಗೆ