ಮೈಸೂರು: ಕೊನೆಗೂ ಮೈಸೂರಿನಲ್ಲಿ ಚುನಾವಣಾ ಪ್ರಚಾರಕ್ಕೆ ಬಂದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡಗೆ ಕಹಿ ಅನುಭವವಾಗಿದೆ.ಮೈಸೂರಿನ ಚಾಮರಾಜನಗರ ಕ್ಷೇತ್ರದಲ್ಲಿ ರೋಡ್ ಶೋನಲ್ಲಿ ಪಾಲ್ಗೊಂಡಿದ್ದಾಗ ದೇವೇಗೌಡರಿಗೆ ಮುಜುಗರವಾಗುವಂತಹ ಘಟನೆ ನಡೆದಿದೆ.ರೋಡ್ ಶೋ ವೇಳೆ ಇಲ್ಲಿನ ಜೆಡಿಎಸ್ ಬಂಡಾಯ ಅಭ್ಯರ್ಥಿ ಹರೀಶ್ ಗೌಡ ಬೆಂಬಲಿಗರು ಘೋಷಣೆ ಕೂಗಿ ಮುಜುಗರವುಂಟು ಮಾಡಿದರು. ಹರೀಶ್ ಪಕ್ಷೇತರರಾಗಿ ಇಲ್ಲಿ ಕಣಕ್ಕಿಳಿದಿದ್ದಾರೆ. ಜೆಡಿಎಸ್ ನಲ್ಲಿ ಅವರಿಗೆ ಟಿಕೆಟ್ ನೀಡದೇ ಇರುವುದಕ್ಕೆ ಅವರ ಬೆಂಬಲಿಗರು ದೇವೇಗೌಡರ ಎದುರೇ ಅವರ