ಬೆಂಗಳೂರು: ಮಗ ಮುಖ್ಯಮಂತ್ರಿಯಾಗುತ್ತಿದ್ದಾನೆಂದರೆ ಯಾರಿಗೆ ತಾನೇ ಖುಷಿಯಿರುವುದಿಲ್ಲ ಹೇಳಿ? ಸ್ವತಃ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರಿಗೂ ಅದೇ ಆಗಿದೆ.ಫಲಿತಾಂಶ ಬಂದ ದಿನದಿಂದಲೂ ದೇವರ ಮೊರೆ ಹೋಗಿರುವ ಎಚ್ ಡಿ ದೇವೇಗೌಡ ನಿನ್ನೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಪುತ್ರರ ಜತೆ ಶೃಂಗೇರಿಗೆ ಭೇಟಿ ನೀಡಿದ್ದರು.ಇಂದು ಮಗ ಕುಮಾರಸ್ವಾಮಿ ಪ್ರಮಾಣ ವಚನಕ್ಕೂ ಮೊದಲೂ ದೇವೇಗೌಡರು ಪೂಜೆಯಲ್ಲಿ ನಿರತರಾಗಿದ್ದಾರೆ. ಬೆಳಿಗ್ಗೆಯೇ ಜ್ಯೋತಿಷಿ ಜಯನಗರದ ಸಂಪತ್ ರವಿನಾರಾಯಣ ಮನೆಗೆ ಭೇಟಿ ನೀಡಿದ ದೊಡ್ಡ ಗೌಡರು