ಬೆಂಗಳೂರು: ಬಿಜೆಪಿ ಆಡಳಿತದಲ್ಲೇ ರಾಜ್ಯಕ್ಕೆ ಸಾಕಷ್ಟು ನಷ್ಟವಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದ್ದಾರೆ.ಬಿಜೆಪಿ ಐದು ವರ್ಷದ ಆಡಳಿತದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಂಡಿದೆ. ಇದುವೇ ಅವರ ದೊಡ್ಡ ಕೊಡುಗೆ. ಕಾಂಗ್ರೆಸ್ ತನ್ನ ಐದು ವರ್ಷದ ಆಡಳಿತಾವಧಿಯಲ್ಲಿ ಒಬ್ಬರೇ ಮುಖ್ಯಮಂತ್ರಿಯನ್ನು ನೀಡಿದರೂ ಲೋಕಾಯುಕ್ತ, ಲೋಕಸೇವಾ ಆಯೋಗದ ಕತೆ ನೋಡಿ ಏನಾಗಿದೆ ಅಂತ ಎಂದು ದೇವೇಗೌಡರು ಟೀಕಿಸಿದ್ದಾರೆ.ಬಿಜೆಪಿ ಆಡಳಿತದಲ್ಲಿ ರಾಜ್ಯ ಸಾಕಷ್ಟು ಅನುಭವಿಸಿದೆ. ಆದ ಕಾರಣ ಯಾವುದೇ