ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರ ಮಾತುಗಳು ಎಲ್ಲೆ ಮೀರುವುದು ಸಹಜ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದಿರುವುದಕ್ಕೆ ವರಿಷ್ಠ ದೇವೇಗೌಡ ಸಿಟ್ಟಿಗೆದ್ದಿದ್ದಾರೆ. ನಿಮ್ಮನ್ನು, ಯಡಿಯೂರಪ್ಪನವರನ್ನು ಗೌರವದಿಂದಲೇ ಕಂಡಿದ್ದೇವೆ. ನಾವೆಂದೂ ಲಘುವಾಗಿ ನಿಮ್ಮ ಬಗ್ಗೆ ಮಾತನಾಡಿಲ್ಲ. ಸುಮ್ಮನೇ ನಮ್ಮನ್ನು ಕೆಣಕಬೇಡಿ. ಮಾತುಗಳ ಮೇಲೆ ಹಿಡಿತವಿರಲಿ. ನಿಮ್ಮ ಮಾತುಗಳನ್ನು ಕೇಳಲು ಹೇಸಿಗೆಯಾಗುತ್ತದೆ. ನಿಮ್ಮ ಹಣದ ಧಿಮಾಕಿಗೆ ಜನರೇ ಬುದ್ಧಿ ಕಲಿಸುತ್ತಾರೆ ಹೀಗಂತ ದೇವೇಗೌಡರು