ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮುಂದುವರಿಸಿದ್ದಾರೆ. ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ವಿಡಿಯೋ ಸಂವಾದ ನಡೆಸಿರೋ ಹೆಚ್.ಡಿ.ಕುಮಾರಸ್ವಾಮಿ, ಮೈತ್ರಿ ಸರಕಾರವಿದ್ದಾಗ ಕೈ ಪಡೆಯ ಗುಂಪೊಂದು ಯಾವುದಕ್ಕೂ ಸಹಕಾರ ನೀಡಿಲ್ಲ ಎಂದಿದ್ದಾರೆ.ಒತ್ತಡದಲ್ಲಿ ಹಾಗೂ ಗುಂಪೊಂದರ ಒತ್ತಡಕ್ಕೆ ಮಣಿದು ಕೆಲಸ ಮಾಡಬೇಕಿತ್ತು. ಇದರ ಕುರಿತು ಕೈ ಪಡೆಯ ಮುಖಂಡರೊಂದಿಗೆ ಸದಾ ಚರ್ಚೆಗೆ ಸಿದ್ಧ ಎಂದು ಆಹ್ವಾನ ನೀಡಿದ್ದಾರೆ.