ಉಪ ಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದಾಗ ಪೊಲೀಸರ ಮೇಲೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗರಂ ಆಗಿರೋ ಘಟನೆ ನಡೆದಿದೆ. ಚಿಕ್ಕಬಳ್ಳಾಪುರದ ನಂದಿ ಕ್ರಾಸ್ ಹತ್ತಿರದಲ್ಲಿ ಚುನಾವಣಾ ಕಣ್ಗಾವಲು ಸಮಿತಿ ತಂಡ ಹೆಚ್.ಡಿ.ಕೆ ಕಾರನ್ನು ತಪಾಸಣೆ ನಡೆಸಿದೆ. ಆಗ ಏನೂ ಸಿಗದೇ ಕಾರು ಮುಂದೆ ಹೋಗಲು ಅನುವು ಮಾಡಿದ್ಧಾರೆ. ಆಗ ಮಾಜಿ ಸಿಎಂ ಪೊಲೀಸರ ಮೇಲೆ ರೇಗಾಡಿದ್ದಾರೆ.ಅನರ್ಹ ಶಾಸಕ ಸುಧಾಕರ ಕಾರನ್ನು ಏಕೆ ತಪಾಸಣೆ ಮಾಡೋದಿಲ್ಲ. ಅವರ ಕಾರಿನಲ್ಲಿ ಎಲ್ಲವೂ ಇರುತ್ತವೆ. ನಮ್ಮ