ರಾಜ್ಯ ರಾಜಕೀಯದಲ್ಲಿ ಮಾಜಿ ಸಿಎಂ ಅವರ ರಾಜಕೀಯ ಫಿನಿಷ್ ಆಗ್ತಿದೆ. ಹೀಗಂತ ಕೇಂದ್ರ ಸಚಿವರೊಬ್ಬರು ಗಂಭೀರ ಟೀಕೆ ಮಾಡಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಹತ್ತಿರ ಇದೀಗ ಯಾವ ಅಸ್ತ್ರ ಉಳಿದಿಲ್ಲ. ಈ ಕಾರಣಕ್ಕೆ ಸಿಡಿ ಗಳನ್ನು ಹೊರಗೆ ತರುತ್ತಿದ್ದಾರೆ ಅಂತ ಸದಾನಂದಗೌಡ ವ್ಯಂಗ್ಯವಾಡಿದ್ದಾರೆ. ಮಂಗಳೂರಲ್ಲಿ ನಡೆದ ಗಲಭೆ ಕುರಿತು ಹೆಚ್ಡಿಕೆ ಸಿಡಿ ಸಿಡಿಸಿದ್ದಾರೆ. ಇದಕ್ಕೆ ಟಾಂಗ್ ಕೊಟ್ಟ ಸದಾನಂದಗೌಡ, ಇಷ್ಟು ದಿನಗಳವರೆಗೆ ಕುಮಾರಸ್ವಾಮಿ ಯಾಕೆ ಸೈಲೆಂಟ್ ಆಗಿದ್ರು ಅಂತ ಪ್ರಶ್ನೆ ಮಾಡಿದ್ದಾರೆ.