ಚಾಮರಾಜಪೇಟೆಯ ಕೊಲೆ ಪ್ರಕರಣದಲ್ಲಿ ಪೋಲಿಸ್ ಅಧಿಕಾರಿ ಕಮಲ್ ಪಂಥ್ ಅವರನ್ನು ಅವಮಾನ ಮಾಡಿದ ಬಿಜೆಪಿ ನಾಯಕರಿಗೆ ಬುದ್ಧಿ ಕಲಿಸಲು ಪೋಲಿಸ್ ಇಲಾಖೆ ಪಿಎಸ್ಐ ನೇಮಕಾತಿ ಹಗರಣವನ್ನು ಬಯಲಿಗೆಳೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದರು. ಚಾಮರಾಜಪೇಟೆಯಲ್ಲಿ ನಡೆದ ಘಟನೆಗೂ ಇದಕ್ಕೂ ಸಂಬಂಧ ಇದೆ, ಪಿಎಸ್ಐ ಹಗರಣದ ಹಿಂದೆ ದೊಡ್ಡ ಕಥೆಯೇ ಇದೇ ಎಂದು ಮಾಜಿ ಸಿಎಂ HDK ಘಟನೆಯ ಒಳ ಸುಳಿಯನ್ನು ಬಿಚ್ಚಿಟ್ಟರು. ಬಿಜೆಪಿಯ ಒಬ್ಬ ವಕ್ತಾರ