ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಸೆಪ್ಟೆಂಬರ್ 23 ರಂದು ಹೃದಯ ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ. ಹೃದಯದ ವಾಲ್ವ್ ಬದಲಾವಣೆ ಚಿಕಿತ್ಸೆಗೊಳಗಾಗಲಿದ್ದಾರೆ. ಹಿಂದೊಮ್ಮೆ ತಮ್ಮ ಹೃದಯದಲ್ಲಿ ಟಿಶ್ಯು ವಾಲ್ವ್ ಅಳವಡಿಸಲಾಗಿತ್ತು. ಇದೀಗ ಅದರ ಬದಲಾವಣೆಗೆ ಶಸ್ತ್ರಚಿಕಿತ್ಸೆಗೊಳಗಾಗಬೇಕಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಮತ್ತು ವಿದೇಶಿ ವೈದ್ಯರ ಸಲಹೆ ಪಡೆಯಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.ಕೆಲವು ತಿಂಗಳಿನಿಂದ ತಮಗೆ ನಿರಂತರವಾಗಿ ಕೆಮ್ಮಿನ ಸಮಸ್ಯೆಯಿದ್ದು, ಅದರಿಂದಾಗಿಯೇ ಹೃದಯದ ಮೇಲೆ ತೀವ್ರ ಒತ್ತಡ ಬಿದ್ದಿದೆ.