ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಎಲ್ಲಾ ಇಲಾಖೆಗಳಲ್ಲಿ ಕೈಯಾಡಿಸುತ್ತಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆರೋಪಕ್ಕೆ ಎಚ್ ಡಿ ರೇವಣ್ಣ ತಿರುಗೇಟು ನೀಡಿದ್ದಾರೆ.ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಯಡಿಯೂರಪ್ಪ ರೇವಣ್ಣ ವಿರುದ್ಧ ಇಂತಹ ಆರೋಪ ಮಾಡಿದ್ದರು. ಅದಕ್ಕೀಗ ಸ್ವತಃ ರೇವಣ್ಣ ತಿರುಗೇಟು ನೀಡಿದ್ದಾರೆ.ನಾನು ಯಾವುದೇ ಇಲಾಖೆಯಲ್ಲೂ ಮೂಗು ತೂರಿಸುತ್ತಿಲ್ಲ. ಬೇಕಾದರೆ ದಾಖಲೆ ಪರಿಶೀಲಿಸಲಿ. ಯಾವುದೇ ಇಲಾಖೆಯಲ್ಲೂ ಅಕ್ರಮ ವರ್ಗಾವಣೆಯಾಗಿಲ್ಲ ಎಂದು ರೇವಣ್ಣ ಪ್ರತಿಪಾದಿಸಿದ್ದಾರೆ.ತಾಜಾ ಸುದ್ದಿಗಳನ್ನು ಓದಲು ವೆಬ್