ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿರುವ ಕಾಂಗ್ರೆಸ್ ನ ಡಿಕೆ ಶಿವಕುಮಾರ್ ಮತ್ತು ಜೆಡಿಎಸ್ ನ ಎಚ್ ಡಿ ರೇವಣ್ಣ ನಡುವೆ ತೆರೆ ಮರೆಯ ಗುದ್ದಾಟ ನಡೆಯುತ್ತಿರುತ್ತದೆ ಎಂಬ ವದಂತಿಗಳಿಗೆ ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.ಲೋಕೋಪಯೋಗಿ ಇಲಾಖೆ ಸಚಿವ ರೇವಣ್ಣ ತಮ್ಮ ಇಲಾಖೆಗಳಲ್ಲೂ ಹಸ್ತಕ್ಷೇಪ ಮಾಡುತ್ತಾರೆ ಎಂದು ಜಲಸಂಪನ್ಮೂಲ ಮತ್ತ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಅಸಮಾಧಾನ ಹೊಂದಿದ್ದಾರೆಂಬ ಸುದ್ದಿಯಿತ್ತು.ಇದು ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲೂ ಕಂಡುಬಂದಿತ್ತು. ಆದರೆ ಇದೀಗ ಮಾಧ್ಯಮಗಳೊಂದಿಗೆ ಈ