ದುಡ್ಡು ಇದ್ದವರು ಆಟ ಆಡ್ತಾರೆ, ಇಲ್ಲಿಯೇ ನಾಮಪತ್ರ ಸಲ್ಲಿಸುವುದಕ್ಕೆ ಸಚಿವ ಸುಧಾಕರ್ ಎಷ್ಟು ಖರ್ಚು ಮಾಡಿದ್ರು ಗೊತ್ತಾ..? ಕೇವಲ ನಾಮಿನೇಷನ್ ಸಲ್ಲಿಸೋಕೆ ಬಿಜೆಪಿ ಅಭ್ಯರ್ಥಿ 10 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ದುಡ್ಡಿದ್ದವರು ಏನೇನೋ ಮಾಡ್ತಾರೆ. ಸುಧಾಕರ್ 8ರಿಂದ 10 ಸಾವಿರ ಸ್ಟೌವ್ ಹಂಚಿದ್ದಾರೆ. ಅದಕ್ಕೆ ಗ್ಯಾಸ್ ಸಂಪರ್ಕ ಕೊಡೋರು ಯಾರು? ಜನ ಎಲ್ಲಿಂದ ಸಿಲಿಂಡರ್ ತಗೋಳ್ತಾರೆ.