ಓಲಾ ಮತ್ತು ಉಬೇರ್ ಕಂಪೆನಿಗಳಿಗೆ ಸವಾಲೊಡ್ಡಲು ಎಚ್ಡಿಕೆ ಕ್ಯಾಬ್ಸ್ ಹುಟ್ಟು ಹಾಕಲಾಗಿದ್ದು, ಯುಗಾದಿ ಹಬ್ಬದಂದು ಕಾರ್ಯಾರಂಭ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಎಚ್ಡಿಕೆ ಕ್ಯಾಬ್ಸ್ ಹುಟ್ಟು ಹಾಕಲಾಗಿದ್ದು, ಮಿನಿ ಕ್ಯಾಬ್ಗೆ ಪ್ರತಿ ಕೀ.ಮಿಗೆ 10 ರೂಪಾಯಿ, ಪ್ರೈಮ್ ಕ್ಯಾಬ್ಗೆ ಪ್ರತಿ ಕಿ.ಮೀ 12 ರೂಪಾಯಿ ದರ ನಿಗದಿಪಡಿಸಲಾಗಿದೆ. ಕ್ಯಾಬ್ನಲ್ಲಿ ಪ್ರಯಾಣಿಕರಿಗೆ ನೀರಿನ ಬಾಟಲ್, ಚಾಕೋಲೇಟ್, ಇಂಟರ್ನೆಟ್ ಸಂಪರ್ಕವಿರುವ ಟ್ಯಾಬ್ ಲಭ್ಯವಿರಲಿದೆ ಎನ್ನಲಾಗಿದೆ.