Widgets Magazine

ನನ್ನನ್ನು ಟೀಕಿಸುವವರಿಗೆ ಯೋಗ್ಯತೆ ಇದ್ಯಾ?- ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಹೆಚ್.ಡಿಕೆ

ಮಂಡ್ಯ| pavithra| Last Modified ಗುರುವಾರ, 26 ಸೆಪ್ಟಂಬರ್ 2019 (12:04 IST)
: ನನ್ನನ್ನು ಟೀಕಿಸುವವರಿಗೆ ಯೋಗ್ಯತೆ ಇದ್ಯಾ? ಎಂದು ಅವರ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಅಗ್ರಹಾರ ಬಾಚಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಶ್ವಾಸ ದ್ರೋಹ ಯಾರು ಮಾಡಿದ್ರೆಂದು ಜನ ನಿರ್ಧರಿಸುತ್ತಾರೆ. ಪಾಪ ಸಿದ್ದರಾಮಯ್ಯ ಮೊನ್ನೆ ಎಲ್ಲೋ ಮಾತನಾಡಿದ್ದಾರೆ. ಅವರು ಮಾಡಿರುವ ರೈತರ ಸಾಲಮನ್ನಾ ಚೆನ್ನಾಗಿತ್ತಂತೆ. ನಾನು ಮಾಡಿದ ಸಾಲಮನ್ನಾ ಸರಿ ಇಲ್ಲವೆಂದು ಹೇಳಿದ್ದಾರೆ, ಏನೋ ಪಾಪ ಮಂಡ್ಯ ಜಿಲ್ಲೆ ಸ್ವಾಭಿಮಾನ ಉಳಿಸಿಬಿಟ್ರಂತೆ. ಸ್ವಾಭಿಮಾನ ಉಳಿಸಿ ಈಗ ಕಬ್ಬು ಮಾರಿಸಿಬಿಟ್ರೆ ಗೊತ್ತಾಗುತ್ತೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕೆ.ಆರ್ ಪೇಟೆ ತಾಲೂಕಿನ 22000 ಕುಟುಂಬದ ಸಾಲಮನ್ನಾ , ಸಹಕಾರಿ, ರಾಷ್ಟ್ರೀಯ ಬ್ಯಾಂಕ್ ಸಾಲಮನ್ನಾ ಮಾಡಿದ್ದೇನೆ. ಈ ಬಗ್ಗೆ 1 ಬುಕ್ ಮಾಡಿಸಿ ಪ್ರತಿ ಹಳ್ಳಿಗೂ ಕಳುಹಿಸುತ್ತೇನೆ. ನನ್ನ 14 ತಿಂಗ ಕೆಲಸಗಳ ಬಗ್ಗೆ ಹಳ್ಳಿ ಜನರಿಗೆ ತಿಳಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :