ಬೆಂಗಳೂರು: ಸುಮಲತಾ-ಎಚ್ ಡಿಕೆ ನಡುವಿನ ಜಟಾಪಟಿ ಈಗ ಕ್ಷಮೆ ಯಾಚನೆಗೆ ಪಟ್ಟು ಕೇಳುವವರೆಗೆ ಬಂದು ನಿಂತಿದೆ. ಇಬ್ಬರ ನಡುವಿನ ಜಟಾಪಟಿ ವೇಳೆ ರೆಬಲ್ ಸ್ಟಾರ್ ಅಂಬರೀಶ್, ಅವರ ಸಾವಿನ ಬಳಿಕ ನಡೆದ ಘಟನೆಗಳ ಪ್ರಸ್ತಾಪವಾಗಿತ್ತು. ಇದರಿಂದ ಅಂಬಿ ಅಭಿಮಾನಿಗಳಿಗೆ ತೀವ್ರ ಬೇಸರವಾಗಿತ್ತು. ಈ ವಿಚಾರವಾಗಿ ಸುಮಲತಾ ಕ್ಷಮೆ ಕೇಳಿ ಪ್ರಕರಣಕ್ಕೆ ಇತ್ಯರ್ಥ ಹಾಡಬೇಕು ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ, ಟಿ ಶರವಣ ಹೇಳಿದ್ದರು.ಈ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಸುಮಲತಾ