ಮನೆ ಬಿಟ್ಟು ಹೋಗು ಎಂದು ಹೇಳಿದರೂ ಹೋಗದವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.ಉಳ್ಳಾಲ ಹತ್ತಿರದ ಚೆಂಬುಗುಡ್ಡೆ ದೇವಸ್ಥಾನದ ಮುಂಭಾಗದಲ್ಲಿ ನಾರಾಯಣ ಎಂಬಾತನ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಕೊಲೆಯಾದವನ ಸಂಬಂಧಿಯೇ ಕೊಲೆ ಮಾಡಿದ್ದಾಗಿ ತನಿಖೆಯಿಂದ ಕಂಡುಕೊಂಡಿದ್ದಾರೆ.ರಾಜೇಶ್ ಎಂಬಾತ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ರಾಜೇಶ್ ನ ತಾಯಿಯ ಅಣ್ಣನ ಮಗನಾಗಿರುವ ನಾರಾಯಣನು ಮನೆ ಬಿಟ್ಟು ಹೋಗುವ ಕುರಿತು ಹಲವು ಬಾರಿ ಜಗಳ ಆಗಿತ್ತು. ಆದರೆ ನಾರಾಯಣ ಮನೆ ಬಿಟ್ಟು ಹೋಗಿರಲಿಲ್ಲ.