ದೇವನಹಳ್ಳಿ: ಸಿದ್ದರಾಮಯ್ಯ ಅಲ್ಲ ಇವರು ಬೆಂಕಿರಾಮಯ್ಯ. ಸಿದ್ದರಾಮಯ್ಯ ಎಲ್ಲಿ ಹೋದ್ರೂ ಕೈಯಲ್ಲಿ ಪೆಟ್ರೋಲ್ ಮತ್ತು ಬೆಂಕಿಪೊಟ್ಟಣ ಇಟ್ಟುಕೊಂಡು ಹೋಗ್ತಾರೆ. ಬೆಂಕಿ ಹಚ್ಚೋದು ಸಿದ್ದರಾಮಯ್ಯ ಗುಣ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಆರೋಪಿಸಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಬಿಜೆಪಿ ಚುನಾವಣಾ ವಿಸ್ತಾರಕರ ಪ್ರಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅಮಿತ್ ಷಾ ಬಂದು ಹೋದ ಮೇಲೆ ಕಾಂಗ್ರೆಸ್ ನಿದ್ದೆಗೆಟ್ಟಿದೆ. ಬಿಜೆಪಿ ನಾಯಕರನ್ನು ನೇರವಾಗಿ ಎದರಿಸಲಾಗದೆ ಜಾತಿಗಳ ಮಧ್ಯೆ ಒಡಕು ಮೂಡಿಸಿದ್ದಾರೆ.