Widgets Magazine

ಉದ್ಯೋಗ ಕೊಡಿಸುವ ನೆಪದಿಂದ ಬಾಂಗ್ಲಾದೇಶದ ಮಹಿಳೆಯರನ್ನು ವೇಶ್ಯಾವಾಟಿಕೆಗೆ ತಳ್ಳಿದ

ಮುಂಬೈ| pavithra| Last Modified ಶುಕ್ರವಾರ, 16 ಅಕ್ಟೋಬರ್ 2020 (10:51 IST)
ಮುಂಬೈ : ಕೊಡಿಸುವ ನೆಪದಿಂದ ಬಾಂಗ್ಲಾದೇಶದ ಮಹಿಳೆಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಘಟನೆ ಮುಂಬೈ ನಲ್ಲಿ ನಡೆದಿದೆ.

ಮೂವರು ವ್ಯಕ್ತಿಗಳು ಸೇರಿ ಮೂವರು ಯುವತಿಯರಿಗೆ  ಉದ್ಯೋಗ ಕೊಡಿಸುವುದಾಗಿ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳದ ಕೊಲ್ಕತ್ತಾಗೆ ಕರೆತಂದು ಬಳಿಕ ಮುಂಬೈಗೆ ಸಾಗಿಸಿ ಅಲ್ಲಿ ವೇಶ್ಯಾವಾಟಿಕೆಗೆ ತಳ್ಳಿದ್ದಾರೆ. ಆಗ ಅದರಲ್ಲಿದ್ದ 20 ವರ್ಷದ ಯುವತಿಯೊಬ್ಬಳು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. 

ತಕ್ಷಣ ಎಚ್ಚೆತ್ತ ಪೊಲೀಸರು ಅವರಿರುವ ಸ್ಥಳಕ್ಕೆ ಬಂದು ಮೂವರು ಯುವತಿಯರನ್ನು ರಕ್ಷಿಸಿದ್ದಾರೆ. ವೇಶ್ಯಾವಾಟಿಕೆಯ ಆರೋಪದ ಮೇಲೆ ಒಬ್ಬನನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.



ಇದರಲ್ಲಿ ಇನ್ನಷ್ಟು ಓದಿ :