ಯುವತಿಯೊಬ್ಬಳಿಗೆ ಹಣ ಕೊಡಬೇಕೆಂದು ತಾಯಿ ಬಳಿ ಹೇಳಿದ್ದ ಯುವಕ ಕೆರೆ ಬಳಿ ಶವವಾಗಿ ಪತ್ತೆಯಾಗಿರುವ ಘಟನೆ ಮೈಸೂರಿನ ಹುಣಸೂರು ತಾಲೂಕಿನ ಬಿಳಿಕೆರೆ ಬಳಿ ನಡೆದಿದೆ. ಕೊಳಗಟ್ಟ ಗ್ರಾಮದ ನಿವಾಸಿ ಅರುಣ್ ಕುಮಾರ್ ಮೃತ ದುರ್ದೈವಿಯಾಗಿದ್ದು, ಅರುಣ್ ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಅರುಣ್ ಕುಮಾರ್ ಮಧ್ಯಾಹ್ನ ಮ್ಯಾನೇಜರ್ ಕರೆಯುತ್ತಿದ್ದಾರೆ ಎಂದು ಹೇಳಿ ಮನೆ ಬಿಟ್ಟಿದ್ದಾನೆ. ಆದರೆ, ಅರುಣ್ ಸಂಜೆಯಾದರೂ ಮನೆಗೆ ಹಿಂದಿರುಗಿಲ್ಲ. ಕುಟುಂಬದವರು ಹಾಗೂ