ಜಿಲ್ಲೆಯ ಸಕಲೇಶ್ಪುರದ ಬಾಳ್ಳುಪೇಟೆ ಗ್ರಾಮದ ಆಸ್ಪತ್ರೆ ಹದಗೆಟ್ಟಿದೆ ಎನ್ನುವ ಗ್ರಾಮಸ್ಥರ ಮಾತಿಗೆ ಯಾಕೆ ಕಿವಿಗೊಡುವುದಿಲ್ಲ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಖಾಸಗಿ ವಾಹಿನಿಯೊಂದು ನಡೆಸುತ್ತಿರುವ ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆರೋಗ್ಯ ಸಚಿವ ರಮೇಶ್ ಕುಮಾರ್, ಡನತೆಯ ಕರೆಗಳಿಗೆ ಉತ್ತರಿಸುತ್ತಿದ್ದರು. ಬಾಳ್ಳುಪೇಟೆಯಲ್ಲಿ ಆಸ್ಪತ್ರೆಯಲ್ಲಿ ಸಂಜೆಯಾದರೆ ಆಸ್ಪತ್ರೆಯಲ್ಲಿ ವೈದ್ಯರು ಇರುವುದಿಲ್ಲ. ಆಸ್ಪತ್ರೆ ಅವ್ಯವಸ್ಥೆಯ ತಾಣವಾಗಿದ್ದರೂ ಜಿಲ್ಲಾ ಆರೋಗ್ಯ ಅಧಿಕಾರಿ ಏನು ಮಾಡುತ್ತಿದ್ದಾರೆ.