ಕಾರವಾರ: ಅರಣ್ಯ ಪ್ರದೇಶದೊಳಗಿನ ಅಪರಾಧ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವಿಶೇಷವಾಗಿ ತರಬೇತಿಗೊಳಿಸಿದ ಜರ್ಮನ್ ಶೆಫರ್ಡ್ ತಳಿಯ ನಾಯಿಗಳನ್ನು ರಾಜ್ಯದ ಎಲ್ಲ ಅರಣ್ಯ ಪ್ರದೇಶಗಳಲ್ಲಿ ನಿಯೋಜಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಈಗಾಗಲೇ ಮೊದಲ ಪ್ರಯೋಗವಾಗಿ ಕಾರವಾರದ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ವಿಶೇಷ ತರಬೇತಿ ಪಡೆದ ಕ್ಲಿಪರ್ ಹೆಸರಿನ ಜರ್ಮನ್ ಶೆಫರ್ಡ್ ನಾಯಿ ಆಗಮಿಸಿದ್ದು, ಕೆಲವೇ ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲಿದೆ. ಸದ್ಯ ಇದನ್ನು