ಬೆಂಗಳೂರು: ಬನ್ನೇರಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ನಡೆದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಬೆಳಗ್ಗೆ 7.30ಕ್ಕೆ ಶುರುವಾದ ಆಪರೇಷನ್, 8.15ರ ಸುಮಾರಿಗೆ ಆಪರೇಷನ್ ಮುಗಿದಿತ್ತು. ಹತ್ತು ವರ್ಷಗಳ ಹಿಂದೆ ಅಳವಡಿಸಿದ್ದ ಟಿಶ್ಯುವಾಲ್ವ್ ರಿಪ್ಲೇಸ್ ಮಾಡಲಾಗಿದೆ. ಚಿಕಿತ್ಸೆ ಬಳಿಕ ರಿಕವರಿಗಾಗಿ ಕನಿಷ್ಠ ಮೂರು ಗಂಟೆ ಬೇಕು. ಹೀಗಾಗಿ 12 ಗಂಟೆ ವೇಳೆಗೆ ಕುಮಾರಸ್ವಾಮಿ ಆರೋಗ್ಯ ಸಹಜ ಸ್ಥಿತಿಗೆ ಬರುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.ಡಾ. ಸತ್ಯಕಿ ನೇತೃತ್ವದಲ್ಲಿ ಈ ಆಪರೇಷನ್