ಮಳೆಗೆ ಭಾರಿ ಹಾನಿ; ರಾಜಕಾಲುವೆ ಬ್ಲಾಕ್

ಬೆಂಗಳೂರು, ಶನಿವಾರ, 20 ಏಪ್ರಿಲ್ 2019 (15:22 IST)

ಭಾರಿ ಮಳೆಗೆ ರಾಜಧಾನಿಯ ಕೆಲವು ಪ್ರದೇಶಗಳು ತತ್ತರಗೊಂಡಿವೆ. ರಾಜಕಾಲುವೆ ಅಲ್ಲಲ್ಲಿ ಬ್ಲಾಕ್ ಆಗಿದ್ದು ಜನರನ್ನು ಇನ್ನಷ್ಟು ಹೈರಾಣಾಗುವಂತೆ ಮಾಡಿದೆ.

ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ಮಳೆ ಬಿದ್ದು ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿ ವ್ಯಾಪ್ತಿಯ ರುಕ್ಮಿಣಿನಗರದ ಸೆಂಟ್ ಮೇರಿಸ್ ಹೈಸ್ಕೂಲ್ಗೆ ರಾಜಕಾಲುವೆ ನೀರು ನುಗ್ಗಿ ಲ್ಯಾಬ್, ಸ್ಮಾರ್ಟ್ ಬೋರ್ಡ್ ಸೇರಿದಂತೆ ಪಠ್ಯ ಪುಸ್ತಕ ಸಾಮಗ್ರಿಗಳು ಹಾನಿಗೊಳಗಾಗಿವೆ.

ಟಿ.ದಾಸರಹಳ್ಳಿ ಶಾಸಕ ಆರ್.ಮಂಜುನಾಥ್ ಸೇರಿದಂತೆ ಬಿಬಿಎಂಪಿ ಇಂಜಿನಿಯರ್ ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಬಿಬಿಎಂಪಿ ಅಧಿಕಾರಿಗಳಿಗೆ ಕಾಲುವೆಗಳ ದುರಸ್ತಿ ಬಗ್ಗೆ ಸೂಚನೆ ನೀಡಲಾಯಿತು.

ಸಾಕಷ್ಟು ಭಾಗಗಳಲ್ಲಿ ರಾಜಕಾಲುವೆ ಬ್ಲಾಕ್ ನಿಂದ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ. ಈ ಸಂಬಂಧ ಬಿಬಿಎಂಪಿ ಅಧಿಕಾರಗಳ ಸಭೆ ಕರೆದು ಸಮಸ್ಯೆ ಬಗೆ ಹರಿಸೋದಾಗಿ ಮಾಧ್ಯಮಗಳಿಗೆ ಶಾಸಕ ಆರ್.ಮಂಜುನಾಥ್ ಹೇಳಿಕೆ ನೀಡಿದ್ರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶಾಸಕರ ಮನೆಗೆ ಕನ್ನ; ದೋಚಿಕೊಂಡು ಹೋಗಿದ್ದು ಏನೆಲ್ಲಾ?

ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಶಾಸಕರೊಬ್ಬರ ಮನೆಗೆ ಕನ್ನ ಹಾಕಿರುವ ಘಟನೆ ನಡೆದಿದೆ.

news

ಬಿ.ಎಲ್ ಸಂತೋಷ್ ಗೆ ಹೇಳಿಕೆಗೆ ತಿರುಗೇಟು ನೀಡಿದ ಸಿದ್ಧರಾಮಯ್ಯ

ಬೆಳಗಾವಿ : ಸಿದ್ದರಾಮಯ್ಯನ ಆತ್ಮ ಕೊಪ್ಪಳದಲ್ಲಿದೆ ಎಂಬ ಬಿ.ಎಲ್ ಸಂತೋಷ್ ಗೆ ಹೇಳಿಕೆಗೆ ಇದೀಗ ಸಿದ್ಧರಾಮಯ್ಯ ...

news

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರ ವಿರುದ್ಧ ಮಾಜಿ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯದ ಆರೋಪ

ನವದೆಹಲಿ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ರಂಜನ್ ಗೊಗೊಯ್ ವಿರುದ್ಧ ಸುಪ್ರೀಂ ಕೋರ್ಟಿನ ಮಾಜಿ ...

news

ಮೋದಿಯಂತಹ ಕ್ರಿಮಿನಲ್ ನನ್ನು ನಾನು ನೋಡಿಯೇ ಇಲ್ಲ- ನಟಿ ವಿಜಯಶಾಂತಿ ವಿವಾದಾತ್ಮಕ ಹೇಳಿಕೆ

ಕಲಬುರಗಿ : ಪ್ರಧಾನಿ ಮೋದಿ ನಂಬರ್ ಒನ್ ಕ್ರಿಮಿನಲ್. ಮೋದಿಯಂತಹ ಕ್ರಿಮಿನಲ್ ನನ್ನು ನಾನು ನೋಡಿಯೇ ಇಲ್ಲ ...