ಕೆಜಿಎಫ್ ಸಂಭ್ರಮ್ ನಿಂದ ನೂರಾರು ವಿದ್ಯಾರ್ಥಿಗಳಿಗೆ ಭಾರೀ ದೋಖಾ ಆಗಿರೋ ಆರೋಪ ಕೇಳಿಬಂದಿದೆ. ರಾಜ್ಯದ ಮತ್ತೊಂದು ಮೆಡಿಕಲ್ ಕಾಲೇಜು ವಂಚನೆಯ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಕೋಲಾರ ಜಿಲ್ಲೆಯಲ್ಲಿನ ಈ ಮೆಡಿಕಲ್ ಕಾಲೇಜು ನೂರಾರು ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡಿದೆ. ಈ ಮೆಡಿಕಲ್ ಕಾಲೇಜ್ ನವರು ಕೊಟ್ಟ ದುಡ್ಡಿಗೆ ಕೈಯೊಡ್ಡಿದ ಸರ್ಕಾರಿ ಅಧಿಕಾರಿಗಳು, ಮುಗ್ಧ ವಿದ್ಯಾರ್ಥಿಗಳ ಬದುಕಿಗೆ ಕೊಳ್ಳಿಯಿರಿಸಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜೊಂದು ನೂರಿಪ್ಪತ್ತು ವಿದ್ಯಾರ್ಥಿಗಳನ್ನು ಅಕ್ಷರಶಃ ಬೀದಿಗೆ