ಬೆಂಗಳೂರಿನಲ್ಲಿ ಹಲವೆಡೆ ನಿನ್ನೆ ರಾತ್ರಿ ಭಾರೀ ಮಳೆಯಾದ ಪರಿಣಾಮ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಈ ಪೈಕಿ ಎರಡು ತಿಂಗಳ ಹಿಂದೆಯಷ್ಟೆ ಸಂಪೂರ್ಣ ಜಲಾವೃತವಾಗಿದ್ದ ಸಾಯಿ ಲೇಔಟ್ ಕೂಡ ಒಂದು. ಇಲ್ಲಿನ ಜನರ ಬೇಸರದ ಸಂಗತಿ ಏನೆಂದರೆ, ಈ ಪ್ರದೇಶಕ್ಕೆ ಅಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ಕೊಟ್ಟು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು.