ಕುಂಭ ದ್ರೋಣ ಮಳೆಗೆ ಕರಾವಳಿಯ ಉಡುಪಿ ಜಿಲ್ಲೆ ತತ್ತರಿಸಿ ಹೋಗಿದೆ. ಭಾಗಶಃ ಉಡುಪಿಯ ಬಹುತೇಕ ತಗ್ಗು ಪ್ರದೇಶಗಳು ಜಲಾವೃತ್ತ ಗೊಂಡಿದೆ. ಮಳೆಯಿಂದ ಉಡುಪಿಯ ಕರಾವಳಿ ಬೈಪಾಸ್ ಮತ್ತು ನಿಟ್ಟೂರಿನ ಅಂಬಿಕಾ ಟಿಂಬರ್ ಆಸುಪಾಸಿನ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು, ಅಪಾಯಕಾರಿ ಸ್ಥಳಗಳಲ್ಲಿರುವ ಸುಮಾರು 60-70 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.