ಎಡೆಬಿಡದೇ ಸುರಿಯುತ್ತಿರುವ ಮಳೆ ಇನ್ನು ಅವಾಂತರ ಗಳನ್ನು ಮಾಡುತ್ತಿದ್ದು, ಮಳೆಯಿಂದಾಗಿ ತಾಲೂಕಿನ ಹಲವೆಡೆ ಮನೆಗಳು ಕುಸಿದಿವೆ. ತಾಲೂಕಿನ ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಬಂಡಮ್ಮನಹಳ್ಳಿ ಗ್ರಾಮದಲ್ಲಿ, ಮುಜರಾಯಿ ಇಲಾಖೆಗೆ ಸೇರಿದ ಬಂಡಿ ಮಹಾಕಾಳಿ ದೇವಾಲಯದ ಗೋಡೆ ಕುಸಿದಿದೆ.ನಗರದ ಶಾಂತಿ ನಗರದ ಮಹೇಶ್ ಎನ್ನುವವರ ಮನೆಯ ಗೋಡೆ ಕುಸಿದ ಕಾರಣ ಪ್ಲಾಸ್ಟಿಕ್ ಪೇಪರ್ ಹೊದಿಸಿ ಜೀವನ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.