ಹೆಡಗೇವಾರ್ ಅವರ ಉತ್ತಮ ಭಾಷಣ ಸೇರಿಸಿದ್ದೇವೆ. ಇದರಲ್ಲಿ ತಪ್ಪೇನಿದೆ? ಬರಗೂರು ರಾಮಚಂದ್ರಪ್ಪ ಸಮಿತಿ 19 ಬ್ರಾಹ್ಮಣರ ಪಠ್ಯ ಸೇರಿಸಿದ್ದಾರೆ. ಇದನ್ನು ಯಾಕೆ ಪ್ರಶ್ನೆ ಕೇಳುತ್ತಿಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗೂರು ರಾಮಚಂದ್ರಪ್ಪ ಅವರು ಸಮಿತಿ ಅಧ್ಯಕ್ಷರಾಗಿದ್ದಾಗ ಹಲವು ಪಠ್ಯಗಳನ್ನು ತೆಗೆದು ಹಾಕಲಾಯಿತು. ಅದನ್ನು ಯಾರೂ ಪ್ರಶ್ನೆ ಮಾಡಲಿಲ್ಲ. ಈಗ ನಾನು ಬದಲಾವಣೆ ಮಾಡಿದರೆ ಪ್ರಶ್ನೆ ಮಾಡುತ್ತೀರಾ ಎಂದು ಪ್ರಶ್ನಿಸಿದರು.