ರೇಷ್ಮೆ ಸೀರೆ ಎಂದರೆ ಯಾವ ಮಹಿಳೆಯರಿಗೆ ಇಷ್ಟವಾಗೋದಿಲ್ಲ ಹೇಳಿ. ಇನ್ನು ವೆರೈಟಿ ಹಾಗೂ ಹೊಸ ಮಾಡೆಲ್ ರೇಷ್ಮೆ ಸೀರೆಗಳು ನಿಮಗೆ ಬೇಕಾದ್ರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ.ಕಲಬುರಗಿ ನಗರದಲ್ಲಿ ಕೆ.ಎಸ್.ಐ.ಸಿ. ವತಿಯಿಂದ ಮೈಸೂರು ರೇಷ್ಮೆ ಸೀರೆಗಳ ಮಾರಾಟ ಮತ್ತು ಪ್ರದರ್ಶನ ಏರ್ಪಡಿಸಲಾಗಿದೆ. ಈ ವರ್ಷದ ಮಾರಾಟ ಮೇಳದಲ್ಲಿ ಕಡಿಮೆ ಬೆಲೆಯಲ್ಲಿ ಮೈಸೂರು ರೇಷ್ಮೆ ಸೀರೆಗಳನ್ನು ಮಾರಾಟ ಮಾಡಲಾಗುತ್ತಿದ್ದು, ನಾಗರಿಕರು ಇದರ ಪ್ರಯೋಜನ ಪಡೆಯಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು. ಕಲಬುರಗಿ ನಗರದ