ತನ್ನದಲ್ಲದ ತಪ್ಪಿಗೆ ರೈತರೊಬ್ಬರ ಅಡಕೆ ತೋಟ ಬೆಂಕಿಗೆ ಆಹುತಿಯಾಗಿದೆ. ಬಿಬಿಎಂಪಿ ಕಸದ ರಾಶಿಗೆ ಇಟ್ಟಿರುವ ಬೆಂಕಿಗೆ ರೈತರ ಅಡಕೆ ತೋ ಭಸ್ಮವಾದ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕಾಟೇನಹಳ್ಳಿ ವಾಸಿ ಹನುಮಂತ ರಾಯಪ್ಪ ಅವರಿಗೆ ಸೇರಿದ ಅಡಕೆ ತೋಟ ಬೆಂಕಿಗಾಹುತಿ ಆಗಿದೆ. ಬೆಂಗಳೂರಿನಿಂದ ತಂದು ಸುರಿಯುತ್ತಿರುವ ಕಸದ ರಾಶಿಗೆ ಬೆಂಕಿ ಇಟ್ಟಿರೋ ಪರಿಣಾಮ ಗಾಳಿ ಮೂಲಕ ಬೆಂಕಿ ಹರಡಿ ಇಡೀ ಅಡಕೆ ತೋಟವನ್ನ ಬೆಂಕಿಯು ಬಲಿ ತೆಗೆದುಕೊಂಡಿದೆ.ದೊಡ್ಡಬಳ್ಳಾಪುರ