ರಾಜ್ಯ ರಾಜಕಾರಣದಲ್ಲಿ ತಾವೇ ಸರ್ವಸ್ವ, ಸರ್ವೋಚ್ಚ ನಾಯಕ ಎಂದು ಬೀಗುತ್ತಿದ್ದ ಬಿಜೆಪಿ ನಾಯಕರಿಗೆ ಪಕ್ಷದ ಹೈಕಮಾಂಡ್ ಶಾಕ್ ನೀಡಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರಿಗೆ ಪಕ್ಷದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಅಥವಾ ಶಿಫಾರಸ್ಸು ಮಾಡುವ ಅಧಿಕಾರದಿಂದ ವಂಚಿತಗೊಳಿಸಿದೆ ರಾಜ್ಯದ 224 ಕ್ಷೇತ್ರಗಳಿಗೆ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ತಾನೇ ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ. ಹೈಕಮಾಂಡ್ನ ಅಂತರಿಕ ಸರ್ವೆಯಿಂದ ಗೆಲ್ಲುವ ನಾಯಕರಿಗೆ